Saturday, 29 December 2012



                          ಅಮ್ಮಾ ನಾನು ಬದುಕಬೇಕು ಎನ್ನುತಲೇ ಬದುಕಿಗೆ ವಿಧಾಯ...ಹೇಳಿದ
                                            ದೆಹಲಿ ಗ್ರೂಪ್ ರೇಪ್ ವಿದ್ಯಾರ್ಥಿನಿ.......

                                ------------------------------------------------------------

                                            ಕೃತ್ಯಕ್ಕೆ ''ಕೊಡಗು ವಾರ್ತೆ'' ಖಂಡನೆ.......!!!
                                     ------------------------------------------------------
                                           Damini Died Today In Singapore..... 
                             1 Like = 1000 Prayers For Her Soul....
                              Ignore = U Dont Have Heart...........

 
-----------------------------------------------------------------------------------------------------------
 

"ಅಮ್ಮಾ ನಾನು ಬದುಕಬೇಕು" ಎಂದು ಹೇಳುತ್ತಲೇ, ಬದುಕಿನ ಬಗೆಗೆ ಅತೀವ ತುಡಿತ ಹೊಂದಿದ್ದ, ಅತ್ಯಾಚಾರವೆಂಬ ಪಿಡುಗನ್ನು ತೊಡೆದು ಹಾಕಲು ಪಣ ತೊಟ್ಟಂತೆ ಅತೀವ ಆತ್ಮವಿಶ್ವಾಸದಿಂದಿದ್ದ ಚೇತನವೊಂದು ನಂದಿಹೋಗಿದೆ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಈ ಕುರಿತು ಕಾನೂನು ತಿದ್ದುಪಡಿ ಮಾಡಬೇಕು ಎಂಬ ಯುವಜನಾಂಗದ ಹೋರಾಟ ಮುಂದುವರಿಯುತಿದ್ದಂತೆ ವಿದ್ಯಾರ್ಥಿನಿ ಈ ಪಾಪಿಗಳ ಲೋಕಕ್ಕೆ ವಿಧಾಯ ಹೇಳಿದಾಳೆ . "ಡಿ.16ರಂದು ಹೊಸದಿಲ್ಲಿಯಲ್ಲಿ ಅತ್ಯಾಚಾರಕ್ಕೀಡಾಗಿ ಬರ್ಬರ ಹಿಂಸೆಗೆ ಗುರಿಯಾದ 23ರ ಹರೆಯದ ವಿದ್ಯಾರ್ಥಿನಿ ಸಿಂಗಾಪುರದಲ್ಲಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆಯೇ, ದಿಲ್ಲಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಇಂಡಿಯಾ ಗೇಟ್ ಮತ್ತು ರೈಸಿನಾ ಹಿಲ್ ಪ್ರದೇಶವನ್ನು ಮುಚ್ಚಲಾಗಿದೆ. ಇದರೊಂದಿಗೆ ಸಮೀಪದ 10 ಮೆಟ್ರೋ ರೈಲು ನಿಲ್ದಾಣಗಳಿಗೂ ಬೀಗ ಹಾಕಲಾಗಿದೆ.
ಇಂಡಿಯಾ ಗೇಟ್ ಮತ್ತು ರೈಸಿನಾ ಹಿಲ್ (ರಾಷ್ಟ್ರಪತಿ ಭವನ ಇರುವ ಪ್ರದೇಶ) ಸಂಪರ್ಕಿಸುವ ರಾಜಪಥದ ಆದ್ಯಂತವಾಗಿ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ವಿಜಯ್ ಚೌಕ, ರಾಜಪಥ, ರೈಸಿನಾ ಹಿಲ್‌ಗೆ ಸಂಪರ್ಕಿಸುವ ಎಲ್ಲ ಮಾರ್ಗಗಳನ್ನೂ ಬಂದ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಕಳೆದ ವಾರ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಪ್ರತಿಭಟಿಸುತ್ತಿದ್ದವರ ಮೇಲೆ ಜಲಫಿರಂಗಿ, ಅಶ್ರುವಾಯು ಮಾತ್ರವಲ್ಲದೆ ಲಾಠಿಗಳನ್ನೂ ಪ್ರಯೋಗಿಸಲಾಗಿತ್ತು. ಹಲವು ಪ್ರತಿಭಟನಾಕಾರರು ಆಸ್ಪತ್ರೆ ಸೇರಿದ್ದರೆ, ಒಬ್ಬ ಪೊಲೀಸ್ ಪೇದೆಯೂ ಸಾವನ್ನಪ್ಪಿದ್ದರು.

ಮೆಟ್ರೋ ನಿಲ್ದಾಣಗಳಿಗೆ ಬೀಗ.........
ಅತ್ಯಾಚಾರಕ್ಕೀಡಾದ 23ರ ವಿದ್ಯಾರ್ಥಿನಿ ಮೃತಪಟ್ಟ ಬಳಿಕ ಜನಾಕ್ರೋಶ ಹೆಚ್ಚಾಗುವ ಆತಂಕದಲ್ಲಿ ದಿಲ್ಲಿ ಪೊಲೀಸರು ದಿಲ್ಲಿಯ ಮೆಟ್ರೋ ರೈಲಿನ 10 ನಿಲ್ದಾಣಗಳನ್ನು ಶನಿವಾರ ಅನಿರ್ದಿಷ್ಟಾವಧಿ ಕಾಲ ಮುಚ್ಚಿದ್ದಾರೆ.

ಪ್ರತಿಭಟನಾಕಾರರು ಇಂಡಿಯಾ ಗೇಟ್‌ಗೆ ಆಗಮಿಸದಂತೆ ತಡೆಯುವುದೇ ಇದರ ಮೂಲ ಉದ್ದೇಶವಾಗಿದೆ. ಇಂಡಿಯಾ ಗೇಟ್ ಹಾಗೂ ರೈಸಿನಾ ಹಿಲ್ಸ್ ಸಮೀಪವಿರುವ ಎಲ್ಲ ಸ್ಟೇಶನ್‌ಗಳನ್ನು ಮುಚ್ಚಲಾಗಿದೆ. ಕಳೆದವಾರವೂ ಪ್ರತಿಭಟನೆ ತೀವ್ರವಾದಾಗ ಪೊಲೀಸರು ಇದೇ ಕ್ರಮ ಕೈಗೊಂಡಿದ್ದರು. ಪ್ರಗತಿ ಮೈದಾನ್, ಮಂಡಿ ಹೌಸ್, ಬಾರಾಖಂಬಾ ರೋಡ್, ರಾಜೀವ್ ಚೌಕ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಉದ್ಯೋಗ್ ಭವನ್, ರೇಸ್ ಕೋರ್ಸ್, ಜೋರ್ ಭಾಗ್ ಮತ್ತು ಖಾನ್ ಮಾರ್ಕೆಟ್ ರೈಲ್ವೇ ಸ್ಟೇಶನ್‌ಗಳು ಮುಚ್ಚಿವೆ.
ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ದಿಲ್ಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ವಿದ್ಯಾರ್ಥಿನಿ ಸಾವು-ಬದುಕಿನ ಹೋರಾಟದಲ್ಲಿ ವಿಫಲಳಾಗಿದ್ದು, ನಸುಕಿನ ಜಾವ (ಭಾರತೀಯ ಕಾಲಮಾನ) 2.15ರ ವೇಳೆಗೆ ಕೊನೆಯುಸಿರೆಳೆದಿದ್ದಾಳೆ.

ಅತ್ಯಾಚಾರದ ವಿರುದ್ಧ ಇಡೀ ದೇಶವನ್ನೇ ಬಡಿದೆಬ್ಬಿಸಿದ್ದ ಈ 23ರ ಹರೆಯದ ವಿದ್ಯಾರ್ಥಿನಿಯ ಮೆದುಳಿಗೆ ಗಾಯವಾಗಿದ್ದು, ಶ್ವಾಸಕೋಶ ಮತ್ತು ಹೊಟ್ಟೆಗೆ ಸೋಂಕು ತಗುಲಿತ್ತು. ಶನಿವಾರ ನಸುಕಿನ ವೇಳೆ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

"ಅವಳು ತನ್ನ ಕುಟುಂಬ ಸದಸ್ಯರು ಮತ್ತು ಭಾರತೀಯ ರಾಜತಾಂತ್ರಿಕ ಕಚೇರಿ ಅಧಿಕಾರಿಗಳೆದುರು ಬದುಕಿಗಾಗಿನ ಹೋರಾಟ ಮುಗಿಸಿದಳು" ಎಂದು ಮೌಂಟ್ ಎಲಿಜಬೆತ್ ಆಸ್ಪತ್ರೆಯ ಸಿಇಒ ಡಾ.ಕೆಲ್ವಿನ್ ಲೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೆರೆಬ್ರಲ್ ಎಡಿಮಾ (ಮೆದುಳಿನ ಊತ)ಕ್ಕೆ ಈಡಾಗಿದ್ದ ಈ ಯುವತಿಗೆ ಇದರಿಂದಾಗಿ ಮಂಗಳವಾರ ದಿಲ್ಲಿಯಲ್ಲಿರುವಾಗಲೇ ಹೃದಯಾಘಾತವಾಗಿತ್ತು. ಸೆರೆಬ್ರಲ್ ಎಡಿಮಾದಿಂದ ಮೆದುಳಿನ ಜೀವಕೋಶಗಳು ಹಾನಿಗೀಡಾಗುತ್ತವೆ ಮತ್ತು ನಾಶವಾಗತೊಡಗುತ್ತವೆ. ಇದು ಸಾವಿಗೆ ಕಾರಣವಾಗಬಲ್ಲುದು.
''ಆಸ್ಪತ್ರೆಗೆ ದಾಖಲಾದ ಸಮಯದಿಂದ ವಿದ್ಯಾರ್ಥಿನಿಯನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಅವರಿಗೆ ಹೃದಯಾಘಾತವೂ ಆಗಿತ್ತು. ಇದರ ಜತೆಗೆ ಹೊಟ್ಟೆ ಮತ್ತು ಶ್ವಾಸಕೋಶದಲ್ಲಿ ಸೋಂಕು ಕಂಡು ಬಂದಿತ್ತು. ಮೆದುಳಿಗೂ ಗಾಯಗಳಾಗಿದ್ದವು'' ತಿಳಿದು ಬಂದಿದೆ.

ಕಳೆದ 11 ದಿನಗಳಿಂದ ಕೃತಕ ಆಮ್ಲಜನಕ ಪೂರೈಕೆ ಅಡಿಯಲ್ಲಿದ್ದ ವಿದ್ಯಾರ್ಥಿನಿಯ ಆರೋಗ್ಯ ಬುಧವಾರ ಬಿಗಾಡಾಯಿಸಿತ್ತು. ಹೀಗಾಗಿ ಗಲಭೆಯ ಸೂಚನೆ ಅರಿತ ಸರಕಾರ ಕೂಡಲೇ ನೆರವಿಗೆ ಧಾವಿಸಿ ಈಕೆಯ ಪೋಷಕರಿಗೆ ವೀಸಾ ವ್ಯವಸ್ಥೆ ಮಾಡಿ ಬುಧವಾರ ತಡರಾತ್ರಿ ಅಂಗಾಂಗ ಕಸಿಗೆ ಹೆಸರಾಗಿರುವ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಕಳುಹಿಸಿತ್ತು. ಸಾವು-ಬದುಕಿನ ಹೋರಾಟದಲ್ಲಿ ವಿಫಲಳಾಗಿದ ವಿದ್ಯಾರ್ಥಿನಿ ನಸುಕಿನ ಜಾವ (ಭಾರತೀಯ ಕಾಲಮಾನ) 2.15ರ ವೇಳೆಗೆ ಕೊನೆಯುಸಿರೆಳೆದಿದ್ದಾಳೆ.

ನಿಜಕ್ಕೂ ಇದೊಂದು ಪೈಶಾಚಿಕ ಕೃತ್ಯವಾಗಿದ್ದು ಇದನ್ನು ''ಕೊಡಗು ವಾರ್ತೆ'' ವಾರ ಪತ್ರಿಕೆ ತೀವ್ರವಾಗಿ ಖಂಡಿಸುತ್ತದೆ.

ಅಪರಾಧಿಗಳನ್ನೂ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸುತ್ತದೆ .

                                                                                                            ನಿಮ್ಮವ.................................
                                                                                                              ಪ್ರವೀಣ್ ಉತ್ತಪ್ಪ ಚಮ್ಮಟೀರ

                                                                                                                cell- 9880967573