Sunday, 13 January 2013

ಕನಸ್ಸು ಮಾರಾಟಕ್ಕಿದೆ...!
 
--------------------------
ಕಟ್ಟೆಯ ಮೇಲೆ ಕುಳಿತು
ಕಳೆದು ಹೋದ ವರ್ಷದ
ಕನಸ್ಸುಗಳನ್ನು  ಹರಡಿ ಕೊಂಡು ಕುಳಿತ್ತಿದ್ದೇನೆ.
ಹರಾಜಿಗೋ.. ಅಲ್ಲಾ..ಮಾರಾಟಕ್ಕೋ..
ಅಥವ ... ದಾನ ಮಾಡಲ್ಲಿಕ್ಕೋ  ಗೊತ್ತಿಲ್ಲ....

ಅಂದು ಬದುಕಿನ ಹಾದಿಯಲ್ಲಿ ಕನಸ್ಸುಗಳನ್ನೊತ್ತು 
ನಾ ನಡೆಯುವಾಗ ಅವಳು ಜೊತೆಗಿದ್ದಳು.
ಆದರೆ ಕನಸ್ಸುಗಳು ಈಡೇರುವಾಗ 
ಅವಳು ನನ್ನ ಬಿಟ್ಟು ಓಡಿ ಹೋದಳು .
ನಾ ಒಬ್ಬನೇ ನನ್ನ ಕನಸ್ಸುಗಳನ್ನು ಹರಡಿ
ಕಾಲ ಕಳೆಯುತ್ತಿದ್ದೇನೆ.
ಅವಳು ಇನ್ನೊಬ್ಬನ ಬಿಸಿ ಅಪ್ಪುಗೆಯಲ್ಲಿ
ನನ್ನ ಮರೆತ್ತಿದ್ದಾಳೆ................
ನಾ ಕಾಯುತ್ತಿರುವೆ ಅವಳಿಗಾಗಿ....
         ಅಲ್ಲಾ....!!
ಅರ್ಥವಿಲ್ಲದ ಈ ಬದುಕ್ಕನ್ನು
ವ್ಯರ್ಥ ಮಾಡಬಾರದು ಎಂದು.