ಪತಿ ನಾರಾಯಣ ಸ್ವಾಮಿ ಮಂಪರು ಪರೀಕ್ಷೆಗೆ ಒತ್ತಾಯ: ಪ್ರಕರಣದ ನೈಜಾಂಶದ ಬಯಲಿಗೆ 15 ದಿನಗಳ ಗಡುವು
ಗೋಣಿಕೊಪ್ಪಲು ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿ ಎದುರು ಪ್ರತಿಭಟನೆ |
ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾಗಿದ್ದ ಹಿರಿಯ ವಿಜ್ಞಾನಿ ಡಾ. ಬಿ. ನಾರಾಯಣ ಸ್ವಾಮಿ ಅವರ ಪತ್ನಿ ಪುಷ್ಪಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೈಜ ಕೊಲೆ ಆರೋಪಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಶನಿವಾರ (ಅಕ್ಟೋಬರ್ 22) ಗೋಣಿಕೊಪ್ಪಲು ಪಟ್ಟಣದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಹಾಗೂ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಟ್ಟಣದ ಪಾಲಿಬೆಟ್ಟ ರಸ್ತೆಯಿಂದ ಪೊಲೀಸ್ ಠಾಣೆಯವರೆಗೆ ನೈಜ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರರು ಭ್ರಷ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಸಿಬಿಐ ತನಿಖೆಗೆ ಒತ್ತಾಯಿಸಿದರು. ಬಳಿಕ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಗೆ ತೆರಳಿ ಪ್ರಕರಣವನ್ನು ಬಯಲಿಗೆಳೆಯಲು ಒತ್ತಾಯಿಸಿ ವೀರಾಜಪೇಟೆ ಸರ್ಕಲ್ ಇನ್ಸ್ ಪೆಕ್ಟರ್ (ಗೋಣಿಕೊಪ್ಪಲು ಪ್ರಭಾರ) ಗಂಗಾಧರಯ್ಯ ಸ್ವಾಮಿ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮಂಗಲ ಮಹಿಳಾ ಮಂಡಳಿ ಅಧ್ಯಕ್ಷೆ ಶೈಲಾ ಸುಬ್ರಮಣಿ, ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಡಿವೈಎಸ್ಪಿ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಪುಷ್ಪಾ ಕೊಲೆಯ ಪ್ರಕರಣದಲ್ಲಿ ನೈಜ ಆರೋಪಿಯನ್ನು ಬಂಧಿಸದೆ ಅಮಾಯಕನನ್ನು ಬಂಧಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಶ್ರೀಮಂಗಲ ಭಾಗದಲ್ಲಿ ಕಾನೂನು ವ್ಯವಸ್ಥೆ ತೀವ್ರ ಹಾಳಾಗಿದೆ. ಅಲ್ಲಿನ ಮಂಜುನಾಥ ಹಾಗೂ ಯೋಗೇಶ್ ಎಂಬ ಪೊಲೀಸ್ 100 ರೂಪಾಯಿಗೂ ಕೈ ಚಾಚುತ್ತಿದ್ದಾರೆ.ಈ ಬಗ್ಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಜಿನ್ನು ನಾಣಯ್ಯ ಮಾತನಾಡಿ, ಕೊಲೆಯಾದ ಪುಷ್ಪಾಳ ಪತಿ ನಾರಾಯಣ ಸ್ವಾಮಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ನೈಜಾಂಶ ಬಯಲಿಗೆ ಬರುತ್ತದೆ. ಕೊಲೆ ಪ್ರಕರಣ ಮುಂದಿಟ್ಟುಕೊಂಡು ನಾರಾಯಣ ಸ್ವಾಮಿ ಕೊಡಗಿನ ಜನರನ್ನೇ ದೂರುತ್ತಿದ್ದಾರೆ. ಈಗ ಬಂಧಿಸಲಾಗಿರುವ ಅಮಾಯಕ ಮಹೇಶನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ನಿಜವಾದ ಆರೋಪಿಯ ಬಂಧನಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು. 15 ದಿನಗಳ ಒಳಗೆ ನೈಜ ಕೊಲೆಗಾರರನ್ನು ಬಂಧಿಸದೆ ಇದ್ದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಯುವ ಒಕ್ಕೂಟದ ಅಧ್ಯಕ್ಷ ಗುರುರಾಜ್ ರಾವ್ ಮಾತನಾಡಿ, ಪ್ರತಿಭಟನೆಗೆ ನಾರಾಯಣ ಸ್ವಾಮಿ ಅವರ ಸಹಕಾರವೂ ಅಗತ್ಯವಿತ್ತು. ಪ್ರತಿಭಟನೆಗೆ ಆಹ್ವಾನಿಸಲು ದೂರವಾಣಿ ಕರೆ ಮಾಡಿದರೆ ಸ್ವಿಚ್ ಆಫ್ ಆಗಿದೆ. ಅವರು ಆರೋಪಿಯಾಗದೆ ಇದ್ದರೆ ಪ್ರಕರಣವನ್ನು ಬಯಲಿಗೆಳೆಯಲು ಅಥವಾ ಆರೋಪಿಯ ಬಂಧನಕ್ಕೆ ಅವರೇ ಒತ್ತಾಯಿಸುತ್ತಿದ್ದರು. ಯಾವುದೇ ಪ್ರತಿಭಟನೆಗೂ ಸ್ಪಂದಿಸುತ್ತಿಲ್ಲ. ಇದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಹಾಜರಿದ್ದು, ಸಂಸದರ ಪರವಾಗಿ ಮನವಿ ಸ್ವೀಕರಿಸಿ ಮಾತನಾಡಿ, ಈ ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಗೊಂದಲ ಮೂಡಿದೆ. ಪೊಲೀಸರ ಬಗ್ಗೆ ವಿಶ್ವಾಸವಿಲ್ಲದಂತಾಗಿದ್ದು, ಅನಾವಶ್ಯಕ ಸಂಶಯಗಳಿಗೆ ಎಡೆ ಮಾಡಿದೆ. ಇದರ ಸತ್ಯಾಂಶವನ್ನು ಕಂಡು ಹಿಡಿಯುವ ಮೂಲಕ ಸಂಶಯವನ್ನು ನಿವಾರಿಸಬೇಕು ಎಂದು ಹೇಳಿದರು.
ಗ್ರಾ.ಪಂ. ಉಪಾಧ್ಯಕ್ಷೆ ಬೋಜಮ್ಮ ಮಾತನಾಡಿ, ಈಗಾಗಲೇ ಬಂಧಿತನಾಗಿರುವ ಆರೋಪಿ ಮಹೇಶ್ "ನಾನು ನಿರಪರಾಧಿ" ಎಂದು ಪತ್ರ ಬರೆದು ತನ್ನ ನೋವನ್ನು ತೋಡಿಕೊಂಡಿದ್ದಾರೆ. ಈ ಎಲ್ಲಾ ಘಟನೆಗಳನ್ನು ಗಮನಿಸಿದಾಗ ಮತ್ತೊಮ್ಮೆ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಈಗಾಗಲೇ ಬಂಧಿತನಾಗಿರುವ ಮಹೇಶ್ ನನ್ನ ಬಳಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆತ ಜುಲೈ 26 ರಂದು ಬೆಳಗ್ಗೆ 8.30 ರಿಂದ ಸಂಜೆ 4.30ರವರೆಗೆ ತನ್ನ ಬಳಿಯಲ್ಲಿಯೇ ಇದ್ದು ತನ್ನೊಂದಿಗೆ ಉಪಹಾರ, ಊಟ ಎಲ್ಲವನ್ನೂ ಮಾಡಿದ್ದಾನೆ. ಸಂಜೆ 4.30ರ ನಂತರ ಏನಾಯಿತೋ ಗೊತ್ತಿಲ್ಲ. ಬಳಿಕ ಜುಲೈ 27 ರಿಂದ 29ರವರೆಗೂ ಕೆಲಸ ಮಾಡಿಕೊಂಡಿದ್ದ ಎಂದು ಮೇಸ್ತ್ರಿ ಕುಂಞಿಮೋನ್, ಮಹೇಶ್ ಸಹಿ ಮಾಡಿದ ಹಾಜರಾತಿ ಪುಸ್ತಕದ ಪ್ರತಿಯನ್ನು ತೋರಿಸಿ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೀರಾಜಪೇಟೆ ನಗರ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮಂಡೇಟಿರ ಅನಿಲ್ ಮಾತನಾಡಿ, ಈ ಹಿಂದೆ ಕೂಡ ವೀರಾಜಪೇಟೆಯ ಕಾಕೋಟುಪರಂಬು ಕೊಲೆ ಪ್ರಕರಣದಲ್ಲಿ ಆರೋಪಿಗಳೊಂದಿಗೆ ಶಾಮೀಲಾದ ಸರ್ಕಲ್ ಇನ್ಸ್ ಪೆಕ್ಟರ್ ಶೈಲೇಂದ್ರ ನೈಜ ಆರೋಪಿಯನ್ನು ಬಂಧಿಸುವಲ್ಲಿ ಹಿಂದೇಟು ಹಾಕಿದ್ದರು. ಆನಂತರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆ ಆರೋಪಿ ಗಳನ್ನು ಬಂಧಿಸಿದರು. ಇದೀಗಲೂ ಕೂಡ ಆರೋಪಿಗಳೊಂದಿಗೆ ಇವರು ಶಾಮೀಲಾಗಿದ್ದಾರೆ. ಪ್ರತಿಭಟನೆ ನಡೆಸಲು ಅನುಮತಿ ಪತ್ರ ಪಡೆಯಲು ಮನವಿ ನೀಡಲಾಗಿತ್ತು. ಆದರೆ ಹಿಂದಿನ ದಿನವೇ ರಜೆಯಲ್ಲಿ ತೆರಳಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ತಪ್ಪು ಮಾಡಿಲ್ಲ ಎಂದರೆ ಪ್ರತಿಭಟನೆಗೆ ಹೆದರುವುದು ಏಕೆ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಯ ಪದಾಧಿಕಾರಿಗಳು ಮಾತನಾಡಿ, ಪ್ರಕರಣವನ್ನು ಸಿಬಿಐ ಅಥವಾ ಸಿಒಡಿ ತನಿಖೆಗೆ ಒಪ್ಪಿಸಬೇಕು. ಇದರ ಬಗ್ಗೆ 15 ದಿನಗಳ ಒಳಗೆ ಕ್ರಮ ಕೈಗೊಳ್ಳದೆ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಗೋಣಿಕೊಪ್ಪಲು ಹೋಬಳಿ ಅಧ್ಯಕ್ಷ ಸುಭಾ ಮುತ್ತಪ್ಪ, ತಾಲೂಕು ಯುವ ಒಕ್ಕೂಟದ ಕಾರ್ಯದರ್ಶಿ ಸಣ್ಣುವಂಡ ನಂದನು ಮುತ್ತಣ್ಣ, ಗ್ರಾ.ಪಂ. ಮಹಿಳಾ ಸದಸ್ಯರಾದ ರೀನಾ ರಾಜೀವ್, ಪ್ರವಿ ಮೊಣ್ಣಪ್ಪ, ಚೇಂದಿರ ಪ್ರಭಾ ನಾಣಯ್ಯ, ಬೀನಾ, ಸುಮಿತ್ರಾ, ರುಕ್ಮಿಣಿ, ರಮಾವತಿ ಹಾಗೂ ಜಿಲ್ಲಾ ನೆಹರು ಯುವ ಕೇಂದ್ರ, ಸುಬ್ರಹ್ಮಣಿ ಯುವತಿ ಮಂಡಳಿ ವೀರಾಜಪೇಟೆ ಮತ್ತು ವಿವಿಧ ಸ್ತ್ರೀ ಶಕ್ತಿ, ಸ್ವ ಸಹಾಯ ಸಂಗದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ |