ಹತ್ಯೆಗೀಡಾಗಿರುವ ಪುಷ್ಪಾ |
ಕೆವಿಕೆ ಕೃಷಿ ವಿಜ್ಞಾನಿ ಡಾ. ಬಿ. ನಾರಾಯಣ ಸ್ವಾಮಿ ಪತ್ನಿ ಪುಷ್ಪಾ ಕೊಲೆ ನಡೆದು ಬರೋಬರಿ 1ªÀµÀð ಮುಗಿದಿದೆ. ಏನು ಅರಿಯದ ಮುಗ್ದೆ ಪುಷ್ಪಾ ಮಣ್ಣಲ್ಲಿ ಮಣ್ಣಾಗಿ ಹೋಗಿ ಆಕೆಯ ದೇಹ ಮಣ್ಣಿನೊಳಗೆ ವಿಲೀನವಾಗಿದೆ. ಆದರೆ ಆಕೆಯ ಆತ್ಮ ಮಾತ್ರ ಇನ್ನೂ ಮುಕ್ತಿ ದೊರಕದೆ ಅಲೆದಾಡುತ್ತಿದೆ. ತನ್ನ ದುರ್ಗತಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಿ ಎಂದು ಪದೇ ಪದೆ ಕೇಳುತ್ತಿದೆಯಾದರೂ ಇನ್ನೂ ತನಿಖೆಯ ಬಾಗಿಲು ತೆರೆದುಕೊಂಡಿಲ್ಲ.
ಎಲ್ಲರಿಗೂ ಈಕೆಯ ಮೇಲೆ ಅನುಕಂಪ ಇದೆಯಾದರೂ ಯಾರೂ ಮುಂದೆ ಬರುತ್ತಿಲ್ಲ. ವಾರ್ತೆಯ ನೇರ ನುಡಿ ತನಿಖಾ ವರದಿಯನ್ನು ನೋಡಿ ಪ್ರತಿನಿತ್ಯ ನೂರಾರು ಕರೆಗಳು ಬರುತ್ತಿವೆ. ಸಾವಿರಾರು ಜನರು ನೇರವಾಗಿ ನಮ್ಮ ತಂಡವನ್ನು ಭೇಟಿಮಾಡಿ ವರದಿ ತುಂಬಾ ಚೆನ್ನಾಗಿತ್ತು, ನಿಜಕ್ಕೂ ಕೊಲೆಗಾರ ಆತನಲ್ಲ ಎಂದು ಬೇರೆ ಕಡೆ ಬೊಟ್ಟು ಮಾಡುತ್ತಿದ್ದಾರೆಯೇ ಹೊರತು ಈ ಕೊಲೆ ಪ್ರಕರಣ ತಾನಾಗಿಯೇ ತೆರೆದುಕೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಕೆಲವೊಂದು ಸಂಘಟನೆಗಳು ಈ ತನಿಖೆಯಲ್ಲಿ ಒಲವು ತೋರುತ್ತಿವೆಯಾದರೂ ಮತ್ತೊಮ್ಮೆ ಮಂಕಾಗಿ ಕುಳಿತಂತೆ ಕಾಣುತ್ತಿವೆ. ಹಲವಾರು ಮಹಿಳೆಯರು ಭೇಟಿ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಹಾಕಿದ ಹೆಜ್ಜೆ ಹಿಂದಕ್ಕೆ ಹಾಕಬೇಡಿ ಎನ್ನುತ್ತಿದ್ದಾರೆ ಹೊರತು ನನ್ನೊಂದಿಗೆ ಹೆಜ್ಜೆ ಹಾಕುತ್ತೇನೆ ಎಂದು ಮುಂದೆ ಬರುವ ಒಬ್ಬ ಅಣ್ಣ ಹಜಾರೆಯು ಕಾಣಿಸುತ್ತಿಲ್ಲ.
ಅದೇಕೋ ಗೊತ್ತಿಲ್ಲ, ಈ ತನಿಖೆಯನ್ನು ಇಲ್ಲಿಗೆ ಮುಗಿಸಿ ನಾನು ಬೇರೆಯವರ ತರಹ ಹಣ ಮಾಡಿಕೊಂಡು ಮದುವೆಯಾಗಿ ಹೆಂಡತಿ ಮಕ್ಕಳೊಂದಿಗೆ ತೆಪ್ಪಗೆ ಇದ್ದುಬಿಡಲೇ ಅನ್ನಿಸುತ್ತಿದೆಯಾದರೂ ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ನಿಜ, ಭ್ರಷ್ಟರ ವಿರುದ್ಧ ಹೋರಾಡು ಎಂದು ಪದೇ ಪದೆ ಕೂಗಿ ಹೇಳುತ್ತಿದೆ.

ಪುಷ್ಪಾಳ ಪತಿ ನಾರಾಯಣ ಸ್ವಾಮಿ |
ವಾರ್ತೆಯ ವರದಿಗೆ ಇಷ್ಟೊಂದು ಜನ ಬೆಂಬಲವನ್ನು ನೋಡಿದಾಗ ಅನ್ಯಾಯದ ವಿರುದ್ಧ ಹೋರಾಡಬೇಕು, ಈ ಕೊಲೆಯ ರಹಸ್ಯವನ್ನು ಸಂಪೂರ್ಣ ಬಯಲು ಮಾಡಿ ಅಂತರ ಪಿಶಾಚಿಯಾಗಿ ಸುತ್ತುತ್ತಿರುವ ಪುಷ್ಪಾಳ ಆತ್ಮಕ್ಕೆ ಶಾಂತಿ ಕೊಡಬೇಕು. ಒಬ್ಬ ನಿರಪರಾಧಿಯನ್ನು ಜೈಲಿನಿಂದ ಹೊರಗೆ ತರಬೇಕು ಅನಿಸುತ್ತಿದೆ. ಒಂದಂತು ಸತ್ಯ ಈ ಕೊಲೆ ಪ್ರಕರಣ ಸರಿಯಾದ ರೀತಿಯಲ್ಲಿ ತನಿಖೆಯಾಗಿ ರಾಜಕೀಯ ಮೇಲಾಟವಾಗದೆ ಹೋದರೆ ಈ ಕೊಲೆ ಪ್ರಕರಣದ ಹಿಂದೆ ಅದೆಷ್ಟು ಅಧಿಕಾರಿಗಳು, ಪೊಲೀಸರು ಹಾಗೂ ವೈದ್ಯರು ಸೇರಿದಂತೆ ಆರೋಪಿಗಳು ಕಂಬಿ ಎಣಿಸಬೇಕಾಗುತ್ತೋ ಗೊತ್ತಿಲ್ಲ. ಸರಕಾರ ಮಾತ್ರ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ತಂಡಕ್ಕೆ ವಹಿಸಲು ಮೀನಾಮೇಷ ಎಣಿಸುತ್ತಿದೆ. ಇದರ ಹಿಂದೆ ಯಾವ ಕಾಣದ ಕೈಗಳ ಓಡಾಟ ಇದೆ ಎಂಬುದೇ ಆಶ್ಚರ್ಯದ ಸಂಗತಿ ಎನ್ನಬಹುದು.
ಕೊಡಗು ವಾರ್ತೆಯ ವರದಿಗೆ ಜಿಲ್ಲೆ ಮಾತ್ರವಲ್ಲ ಹೊರ ಜಿಲ್ಲೆಯಿಂದಲೂ ಕೂಡ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವಾರ್ತೆ ಮುಂದಕ್ಕೆ ನಿಂತು ಪ್ರತಿಭಟನೆ ನಡೆಸಿ ನಾವು ಬರುತ್ತೇವೆ ಎಂಬ ಒತ್ತಾಯದ ಕೂಡ ಅಲ್ಲಲ್ಲಿ ಕೇಳಿ ಬಂತು. ನಿಮ್ಮಲ್ಲಿ ಒಂದು ಮಾತು, ಪ್ರತಿಭಟನೆ ಮಾಡುವುದು ಮಾಡಿಸುವುದು ವಾರ್ತೆಯ ಕಾಯಕವಲ್ಲ. ವಾರ್ತೆ ಏನಿದ್ದರೂ ಸತ್ಯಕ್ಕೆ ಕನ್ನಡಿ ಹಿಡಿದು ನಿಮಗೆ ತೋರಿಸುತ್ತಿದೆ ಅಷ್ಟೆ. ಅದರ ಬೆನ್ನುಹತ್ತುವುದು ಹಾಗೂ ತನಿಖೆ ಮಾಡಿಸುವುದು ನಿಮಗೆ ಬಿಟ್ಟದ್ದು. ನಾನಂತು ಯಾರ ಮುಲಾಜಿಗಾಗಿ ಜೀವನ ನಡೆಸುತ್ತಿಲ್ಲ. ನನಗೆ ಯಾರ ಭಯ ಭೀತಿ ಎನ್ನುವುದು ಇಲ್ಲ. ನಾ ಹಿಡಿಯುವ ಪೆನ್ನಿನ ಮೊನಚಿಗೆ ಗೊತ್ತಿರುವುದು ಒಂದೇ- ಅದು ಪತ್ರಿಕಾಧರ್ಮ ಮಾತ್ರ. ಈ ಪತ್ರಿಕಾ ಧರ್ಮವನ್ನು ಪಾಲಿಸುವಾಗ ಸ್ನೇಹಿತರು, ಸಂಬಂಧಿಕರು ಎದುರಾದರೂ ಒಂದೇ ಮಾನದಂಡ. ಈ ಕೊಲೆ ಪ್ರಕರಣದಲ್ಲಿ ನನ್ನ ಬಂಧುಗಳೇ ಇರಲಿ, ಆತ್ಮೀಯರೇ ಇರಲಿ ಸಿಕ್ಕಿ ಹಾಕಿಕೊಂಡರೆ ಅವರಿಗೆ ತಕ್ಕ ಶಿಕ್ಷೆಯಾಗಲಿ ಎನ್ನುವುದೇ ವಾರ್ತೆಯ ಉದ್ದೇಶ.
ನಿಮ್ಮ ಅಭಿಮಾನ ಹಾಗೂ ಪ್ರೀತಿಯ ಮಾತುಗಳಿಗೆ ನಾನು ಚಿರಋಣಿ. ಈ ಕೊಲೆ ಪ್ರಕರಣ ತನಿಖೆ ಆದಷ್ಟು ಬೇಗ ತೆರೆದುಕೊಂಡು ಮೃತ ಪುಷ್ಪಾಳ ಆತ್ಮಕ್ಕೆ ಶಾಂತಿ ದೊರಕಲಿ, ನಿರಪರಾಧಿ ಹೊರಗೆ ಬರಲಿ ಎನ್ನುವುದು ವಾರ್ತೆಯ ಉದ್ದೇಶ. ಕೂಡಲೇ ಈ ತನಿಖೆಯ ಬಾಗಿಲು ತೆರೆದುಕೊಳ್ಳದಿದ್ದರೆ ವಾರ್ತೆಯ ಬತ್ತಳಿಕೆಯಲ್ಲಿ ಹಲವಾರು ಬಾಣಗಳಿವೆ. ಆ ಬಾಣಗಳು ಈಗಾಗಲೇ ಸೇರಬೇಕಾದ ಜಾಗ ಸೇರಿದೆ. ನನ್ನೊಂದಿಗೆ ಓದುಗರಾದ ನೀವು ಇರುವಾಗ ನನಗ್ಯಾವ ಚಿಂತೆ ಇಲ್ಲ. ನಿಮಗ್ಯಾವ ಅಪನಂಬಿಕೆ ಬೇಡ. ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯುವುದು ವಾರ್ತೆಯ ಗುಣ ಅಲ್ಲ. ವಾರ್ತೆ ಏನಿದ್ದರೂ ವಿಶಿಷ್ಟ ಕೊಡಗಿನ ವಿಭಿನ್ನ ಪತ್ರಿಕೆ. ಇದು ಸತ್ಯಕ್ಕೆ ಹಿಡಿದ ಕನ್ನಡಿ

ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾದ ಮಗು |